ಶುಕ್ರವಾರ, ಜುಲೈ 1, 2011

ಅಣಬೆಗಳು....

ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಮಲೆನಾಡಿನಲ್ಲಿ ಮಳೆಗಾಲ ಶುರುವಾಯಿತೆಂದರೆ ಕೊಳೆತ ದರಕುಗಳ ಸಂದಿಯಲ್ಲೋ, ಮರದ ಕಾಂಡದಲ್ಲೋ, ಎಲ್ಲೆಂದರಲ್ಲಿ ವಿಧವಿಧದ ಅಣಬೆಗಳ ಸಾಮ್ರಾಜ್ಯ. ಸಾಮಾನ್ಯವಾಗಿ "ನಾಯಿಕೊಡೆ" ಎಂದು ಕರೆಯಲ್ಪಡುವ ಅಣಬೆಗಳಿಗೆ ಹೆಸರು ಅದರ
ಬಾಹ್ಯ ಸ್ವರೂಪದಿಂದಲೂ ಬಂದಿರಬಹುದು. ನೋಡಲು ಬಿಚ್ಚಿದ ಕೊಡೆಯಂತೆ ತಲೆಯ ಮೇಲಿರುವ ಟೋಪಿ ಅಗಲವಾಗಿ ಹರಡಿಕೊಂಡು ಒಂದು ಕಡ್ಡಿಯಂತಹ (ಕಾಂಡ) ರಚನೆಯಿಂದ ಭೂಮಿಗೆ ಅಂಟಿಕೊಂಡಿರುವ ಅಣಬೆಗಳು ಸಾಮಾನ್ಯವಾಗಿ ನೋಡಲು ಸಿಗುತ್ತವೆ. ಆದರೆ ವಿವಿಧ ಬಣ್ಣ ಹಾಗೂ ಬಾಹ್ಯ ರಚನೆಗಳನ್ನೋಳಗೊಂಡ ಅಣಬೆಗಳೂ ಕಾಣಸಿಗುತ್ತವೆ. ಸುಮ್ಮನೆ ಅಲೆದಾಡುತ್ತಿದ್ದಾಗ ಆಕರ್ಷಕವಾಗಿ ಕಂಡ ಕೆಲವು ಅಣಬೆಗಳನ್ನು ಸೆರೆಹಿಡಿದು ತಂದಿದ್ದೇನೆ.


ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಸಮಾನಾಂತರ ರೇಖೆಯಲ್ಲಿ ಖಚಿತ ದೂರದಲ್ಲಿ ನಿಗದಿಯಂತೆ ಬೆಳೆಯುತ್ತಿರುವ ಬಿಳಿ ಅಣಬೆಗಳು

ಒಂದರಮೇಲೊಂದು ಸವಾರಿ ಮಾಡುತ್ತಿರುವ ಬಿಳಿ ಅಣಬೆಗಳು

ಬಿಳಿ ಅಣಬೆ

ಒಣಗಿ ಬಿದ್ದ ಕಾಂಡದ ಮೇಲೆ ಬೆಳೆದಿರುವ ಹಳದಿ ಅಣಬೆಗಳು

ಸೊಂಗೆಯ ಸಂದಿಯಿಂದ ಮೇಲೆದ್ದ ಅಣಬೆ

ಪುಟ್ಟ ಬಿಳಿ ಅಣಬೆ


ಕಲ್ಲಿನ ಸಂದಿಯಿಂದ ಮೇಲೆದ್ದ ಕೆಂಪು ಅಣಬೆ

ದರಕಲಿನಿಂದ ಮೇಲೆದ್ದ ಅಣಬೆ

21 ಕಾಮೆಂಟ್‌ಗಳು:

  1. ಎಲ್ಲಿಂದ ಎತ್ತಾಕ್ಯ ಬಂದೆ ಅಷ್ಟೊಂದು ಅಣಬೆಗಳನ್ನ? ಕೈ ಚೆನ್ನಾಗಿದ್ದು :-)

    ಪ್ರತ್ಯುತ್ತರಅಳಿಸಿ
  2. ವಾಹ್ !!

    ನೋಡುವ ಕಣ್ಣಿದ್ದರೆ ಏನೆಲ್ಲ ನೋಡ ಬಹುದು ಅಲ್ವಾ?

    ಮಸ್ತ್ ಅಣಬೆಗಳು...!

    ಪ್ರತ್ಯುತ್ತರಅಳಿಸಿ
  3. ಜೀವ ವೈವಿಧ್ಯ ಎಷ್ಟೊಂದು ಸುಂದರ. ಒಳ್ಳೆ ಮಾಹಿತಿ ಮತ್ತು ಚಿತ್ರಗಳು. ನಿಮ್ಮ ಬ್ಲಾಗಿನ ಇತರ ಚಿತ್ರಗಳೂ ತುಂಬಾ ಸುಂದರವಾಗಿವೆ

    ಪ್ರತ್ಯುತ್ತರಅಳಿಸಿ
  4. oorige hogiddu idkeya neenu? umbla sigalya anabe jote?! nice photos...
    -vinayaka kodsara

    ಪ್ರತ್ಯುತ್ತರಅಳಿಸಿ
  5. ಚಿತ್ತಾಕರ್ಷಕ ವೈವಿಧ್ಯಮಯ ಚಿತ್ರಗಳು...ಮಡಚಿದ ಕೈ ಬೆರಳುಗಳ ಅಣಬೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು
    ಇಂಥ ಚಿತ್ರಗಳನ್ನು ಸೆರೆಹಿಡಿಯಲು ನಿಮಗಿರುವ ಆಸಕ್ತಿ, ಶ್ರದ್ಧೆ ಅನನ್ಯವಾದದ್ದು...

    ಎಷ್ಟಾದರೂ ನೀವು ನಿರಂತರ ಹುಡುಕಾಟದಲ್ಲಿರುತ್ತೀರ ತಾನೆ :)
    Keep exploring...n of-course blogging!!

    ಪ್ರತ್ಯುತ್ತರಅಳಿಸಿ
  6. ಕಾಂತಿ ಈ ಚಿತ್ರಗಳು ಮತ್ತು ಅವುಗಳ ವಿವರಣೆ ಚನ್ನಾಗಿದೆ...ಅಣಬೆ ಕೃಷಿ ಬಹಳ ಲಾಭದಾಯಕ ವೃತ್ತಿಯಾಗಬಹುದು...ಹಾಗೆಯೇ ಅಣಬೆಯಲ್ಲಿ ವಿಷಯುಕ್ತ ಅನಬೆ ಸಹಾ ಇರುತ್ತವೆ....

    ಪ್ರತ್ಯುತ್ತರಅಳಿಸಿ
  7. ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ
    idannu nodiralilla.. nice collection

    ಪ್ರತ್ಯುತ್ತರಅಳಿಸಿ
  8. ನಾನು ಕೆಂಪು ಅಣಬೆ ನೋಡೇ ಇರಲಿಲ್ಲ. ಒಳ್ಳೆ ಕಲೆಕ್ಶನ್. . :)

    ಪ್ರತ್ಯುತ್ತರಅಳಿಸಿ
  9. ಯಾರದ್ದೋ ಬ್ಲಾಗಿಗೆ ಬಂದಾಗ ನಿಮ್ಮ ಬ್ಲಾಗಿಗೆ ಬಂದೆ. ಫೋಟೋಗಳು ಚನ್ನಾಗಿವೆ.

    ಇಗೋ ನನ್ನ (ಅತಿ ಅಪರೂಪಕ್ಕೆ ಬರೆಯುವ) ಬ್ಲಾಗಿಗೆ ಸ್ವಾಗತ-
    http://machikoppa.blogspot.com/

    ಪ್ರತ್ಯುತ್ತರಅಳಿಸಿ