ಟೈಗರ್ಸ್ ನೆಸ್ಟ್ ಹಾದಿಯಲ್ಲಿ ಪುಟ್ಟ ಮಕ್ಕಳು
ಟೈಗರ್ಸ್ ನೆಸ್ಟ್ ಮೊನಾಸ್ಟ್ರಿ
ಪಾರೋ ಛೂ ನದಿಯ ದಡದಿಂದ..
ಬೆಳಗಿನ ಕಾಯಕ..
ಪಾರೋ ಸೌಂದರ್ಯ..
ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಕಾರ್ಪೆಟ್ ನೇಯುತ್ತಿರುವ ಹುಡುಗಿ
ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಬಟ್ಟೆ ನೇಯುವ ಮತ್ತೊಂದು ರೀತಿಯ ಯಂತ್ರ.. ಇದರಲ್ಲಿ ವಿವಿಧ ರೀತಿಯ ಡಿಸೈನ್ ಗಳಿರುವ ಬಟ್ಟೆ ನೇಯಲು ಸಾಧ್ಯವಿಲ್ಲ.. ಮತ್ತು ಇದರಿಂದ ತಯಾರಿಸಿದ ಬಟ್ಟೆಗಳು ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುತ್ತವೆ.
ಡ್ರುಗ್ಯೆಲ್ ಝಾಂಗ್ ಎಂಬ ಜೀರ್ಣಾವಸ್ಥೆಯಲ್ಲಿರುವ ಹಳೆಯ ಕೋಟೆ
ಹೀಗೊಂದು ಸಾಮಾನ್ಯ ಮನೆ..
ಭೂತಾನಿನಲ್ಲಿ ಹೆಚ್ಚಾಗಿ ಬಾವಿಗಳನ್ನು ತೋಡುವುದಿಲ್ಲ. ನದಿಗಳಲ್ಲಿ ನೀರು ಯಾವಾಗಲೂ ಒಂದೇ ತೆರನಾಗಿ ಹರಿಯುವುದರಿಂದ ನದಿಯ ನೀರನ್ನೇ ದಿನನಿತ್ಯದ ಬಳಕೆಗಾಗಿ ಉಪಯೊಗಿಸುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಬ್ಬಿ ನೀರಿನ ಉಪಯೋಗ ಹೆಚ್ಹಾಗಿ ಕಂಡುಬರುತ್ತದೆ. ಮನೆಯ ಮುಂಭಾಗ ಸೋಂಗ್ಫು ಎಂದು ಕರೆಯಲ್ಪಡುವ ಒಲೆಗೆ ಪೈನ್ ಮರದ ಎಲೆಗಳು ಹಾಗೊ ಸಿಪ್ರೆಸ್ (ಇದು ಭೂತಾನಿನ ರಾಷ್ತ್ರೀಯ ಸಸ್ಯ) ಎಲೆಗಳನ್ನು ಒಟ್ಟಿ ಹೊಗೆಬರಿಸಿ ಸುಗಂಧವನ್ನು ಆಹ್ಲಾದಿಸುವ ಆಚರಣೆಯಿದೆ. ಇದೊಂದು ಪವಿತ್ರ ಪದ್ದತಿಯಾಗಿ ಕೂಡಾ ಭೂತಾನಿನಲ್ಲಿ ಜಾರಿಯಲ್ಲಿದೆ.
ಸೋಂಗ್ಫು ಎಂದು ಕರೆಯಲ್ಪಡುವ ಒಲೆ
ಪಾರೋ:
ಶಾರಿ
ಅಥವಾ ಪಾರೋಛು ಎಂಬ ನದಿಯ ತಟದಲ್ಲಿರುವ
ಪಾರೋವಿಗೆ ರಾತ್ರಿ ನಾವು
ತಲುಪುವಷ್ಟರಲ್ಲಿ ಎಲ್ಲ ಅಂಗಡಿ,
ಮುಂಗಟ್ಟುಗಳೂ
ಮುಚ್ಚಿದ್ದವು. ದಾರಿಯಲ್ಲಿ
ಬರುತ್ತಾ ಹೊಟೆಲ್ ಒಂದಕ್ಕೆ
ಕರೆಮಾಡಿ ಕೋಣೆ ಕಾಯ್ದಿರಿಸಿಕೊಂಡಿದ್ದರಿಂದ
ನಾವು ಬಚಾವ್. ಪಾರೋವಿನಲ್ಲಿ
ವ್ಯಾಪಾರ ವಹಿವಾಟೆಲ್ಲಾ ೭ ಗಂಟೆಯೊಳಗೆ
ಬಂದಾಗಿರುತ್ತದೆ. ಆಮೇಲೆ
ಊಟ ಸಿಗುವುದೂ ಕೂಡಾ ಕಷ್ಟ.
ಭೂತಾನಿನಲ್ಲಿ ಯಾವುದೇ
ಹೊಟೆಲ್ಲಿಗೆ ಹೋದರೂ ನೀವು ಆರ್ಡರ್
ಮಾಡಿ ಕನಿಷ್ಟ ಎಂದರೂ ೧ ಗಂಟೆ
ಕಾಯಬೇಕು. ಇಲ್ಲಿ
ಸಾಮಾನ್ಯವಾಗಿ ಕಡಿಮೆ ಜನರು
ಹೊಟೆಲ್ಲುಗಳಿಗೆ ಬರುವುದರಿಂದ
ಇವರು ಮೊದಲೇ ಎಲ್ಲಾ ಪದಾರ್ಥಗಳನ್ನೂ
ಮಾಡಿಟ್ಟುಕೊಂಡಿರುವುದಿಲ್ಲ.
ನಾವು ಹೋಗಿ ಆರ್ಡರ್
ಮಾಡಿದ ಮೇಲಷ್ಟೇ ಅಡಿಗೆ
ಶುರುಹಚ್ಚಿಕೊಳ್ಳುವುದು.
ರಾತ್ರಿ ಊಟ ಬೇಕೆಂದರೆ
೬:೩೦ಕ್ಕೆಲ್ಲಾ
ಹೊಗಿ ಆರ್ಡರ್ ಮಾಡಿರಬೇಕು.
ಚೋಡೆನ್ ಎಂಬ ಹುಡುಗಿ
ನಡೆಸುವ ಹೋಟೆಲ್ ತೆರೆದಿತ್ತು.
ನಾವು ಪಾರೋವಿನಲ್ಲಿ
ತಂಗಿದ್ದಷ್ಟು ದಿನವೂ ಆಕೆಯ
ಹೊಟೆಲ್ಲಿನಲ್ಲಿ ತಿಂದಿದ್ದೇ
ಹೆಚ್ಚು.
ಟೈಗರ್ಸ್ ನೆಸ್ಟ್ ಮೊನಾಸ್ಟ್ರಿ
ಮರುದಿನ
ನಾನು ತಶೀಸೆಲ್ ಸಿಮ್ ಕಾರ್ಡ್
ತೆಗೆದುಕೊಂಡೆ. ನಾನು
ಗುಂಪನ್ನು ಬಿಟ್ಟು ಬೇರೆಯಾಗಿ
ತಿರುಗಾಡಲು ತೊಡಗಿದ್ದರಿಂದ
ನಮ್ಮೊಳಗೆ ಕೆಲವೊಮ್ಮೆ ಮಾತುಕತೆ
ಅನಿವಾರ್ಯವಾದಾಗ ಉಪಯೋಗಕ್ಕೆ
ಬರುತ್ತದೆ ಎಂದು ಎಲ್ಲರೂ
ಒತ್ತಾಯಿಸಿದರು. ಹಾಗೇ
ತಿಂಡಿ ತಿಂದು "ತಕ್ಷಂಗ್"
ಅಥವಾ "ಟೈಗರ್ಸ್
ನೆಸ್ಟ್" ಎಂದು
ಕರೆಯಲ್ಪಡುವ ಮೊನಾಸ್ಟ್ರಿ ಒಂದನ್ನು
ನೋಡಲು ಹೊರಟೆವು. ಪಾರೋವಿನಿಂದ
ಸುಮಾರು ೮ ಕಿ ಮೀ ಹೊರವಲಯದಲ್ಲಿ
ಬೆಟ್ಟ ಹತ್ತಲು ತೊಡಗಿದರೆ ಪಾರೋ
ಕಣಿವೆಯ ಸುಂದರ ದೃಶ್ಯಗಳನ್ನು
ನೋಡುತ್ತಾ ಸುಮಾರು ೩ ಗಂಟೆಗಳ
ಕಾಲ ಬೇಕಾಗುತ್ತದೆ ಟೈಗರ್ಸ್
ನೆಸ್ಟ್ ತಲುಪಲು. ದಾರಿ
ಮಧ್ಯೆ ಸುಮಾರು ವಿದೇಶೀ ಪ್ರವಾಸಿಗರೂ
ಸಿಕ್ಕಿದ್ದರು. ಹಣ್ಣು
ಹಣ್ಣು ವಿದೇಶೀ ಮುದುಕ ಮುದುಕಿಯರು
ಎರಡೂ ಕೈಯಲ್ಲಿ ದೊಣ್ಣೆ ಹಿಡಿದು
ಗೈಡ್ ಸಹಾಯದಿಂದ ಬೆಟ್ಟ ಹತ್ತುವುದೂ,
ಇಳಿಯುವುದೂ ನೋಡಿ
ವಾಹ್!! ಎನಿಸಿತ್ತು.
ಷಕಚು ಎಂಬ ಜಲಪಾತದ
ಎದುರು ಬೆಟ್ಟದ ಒಂದು ಪಾರ್ಶ್ವದಲ್ಲಿ ತುತ್ತ ತುದಿಗೆ
ಕಟ್ಟಲ್ಪಟ್ಟ ಟೈಗರ್ಸ್ ನೆಸ್ಟ್
ಬಹು ಸುಂದರ ಮೊನಾಸ್ಟ್ರಿ. ಗುರು
ರಿಂಪೊಚೆ ಎಂಬ ಬೌದ್ಧ ಸನ್ಯಾಸಿಯೊಬ್ಬ
(೨ನೆಯ ಭುದ್ಧ ಎಂದು
ಕೂಡಾ ಇವರಿಗೆ ಕರೆಯುತ್ತಾರೆ)
ಹಾರುವ ಹುಲಿಯ ಮೇಲೆ
ಬಂದು ಇಲ್ಲಿ ಮೊನಾಸ್ಟ್ರಿ
ನಿರ್ಮಿಸಿದ್ದಾರೆಂಬ ನಂಬಿಕೆಯಿದೆ.
ಆದ್ದರಿಂದಲೇ ಇದಕ್ಕೆ
ಟೈಗರ್ಸ್ ನೆಸ್ಟ್ ಎಂದು ಹೆಸರು
ಬಂತಂತೆ (ಭೂತಾನಿನ
ಯಾವುದೇ ಮೊನಾಸ್ಟ್ರಿ ಅಥವಾ ಝಾಂಗ್
ಗಳಲ್ಲಿ ಕಾಲರ್ ಇರುವ ಪೂರ್ತಿ
ತೋಳಿರುವ ಶರ್ಟ್ ಮತ್ತು ಕಾಲನ್ನು
ಪೂರ್ತಿ ಮುಚ್ಚುವಂತೆ ಬಟ್ಟೆ
ತೊಟ್ಟರೆ ಮಾತ್ರಾ ಒಳಗೆ ಬಿಡುತ್ತಾರೆ).
ದೇವಾಲಯದ ಒಳಗೆ ಗುರು
ರಿಂಪೊಚೆಯ ದೊಡ್ಡ ಮೂರ್ತಿ ಇದೆ.
ಒಳಹೊಕ್ಕು ಕಣ್ಮುಚ್ಚಿ
ಕುಳಿತರೆ ಬೆಟ್ಟ ಹತ್ತಿದ ಸುಸ್ತೆಲ್ಲಾ
ಪೂರ್ತಿ ಮಾಯವಾಗಿ ಬಿಡುತ್ತದೆ.
ವಾಪಾಸಾಗುವ ಹೊತ್ತಿಗೆ
ಕತ್ತಲಾವರಿಸುತ್ತಾ ಬಂದಿತ್ತು.
ಎಂದಿನಂತೆ ಹೊಟೆಲ್ಲುಗಳು
ಮುಚ್ಚುವುದರೊಳಗಾಗಿ ನಾವು ಊಟ
ಮಾಡಬೇಕಿತ್ತು.
ಪಾರೋ ಛೂ ನದಿಯ ದಡದಿಂದ..
ಮರುದಿನ
ಎಂದಿನಂತೆ ಬೇಗ ಎದ್ದು ನದಿಯ
ತಟದಗುಂಟ ಪೂರ್ತಿ ಸುತ್ತಾಡಿ
ಚೊಡೆನ್ನಳಲ್ಲಿ ತಿಂಡಿ ತಿಂದು
ಆಕೆಯ ತಂಗಿ ತಿನ್ಲೆಯೊಟ್ಟಿಗೆ
ಕಾಲ್ನಡಿಗೆಯಲ್ಲಿ ಹಳ್ಳಿಗಳನ್ನು
ಸುತ್ತಲು ಹೊರಟೆ. ಭೂತಾನಿನಲ್ಲಿ
ಮುಂಜಾನೆಯ ಸುತ್ತಾಟ ಹಾಗೂ
ತಿನ್ಲೆಯೊಟ್ಟಿಗಿನ ತಿರುಗಾಟ
ಭೂತಾನಿನ ಸಂಸ್ಕ್ರುತಿಯ ಹೆಚ್ಚಿನ
ಚಿತ್ರಣಗಳನ್ನು ನನಗೆ ಕೊಟ್ಟಿದ್ದು
ಸುಳ್ಳಲ್ಲ. ಪಾರೋ
ಸುತ್ತಲಿನ ಹಳ್ಳಿಗಳ ಸುತ್ತಾಟದಿಂದಾಗಿ
ತಿಳಿದುಕೊಂಡ ಹಲವು ವಿಷಯಗಳ
ಚಿತ್ರಣವನ್ನು ತಕ್ಕಮಟ್ಟಿಗೆ
ನನಗೆ ನೆನಪಿದ್ದಂತೆ ಚಿತ್ರಿಸಲು
ಇಲ್ಲಿ ಪ್ರಯತ್ನಿಸುತ್ತಿದ್ದೇನೆ.
ಬೆಳಗಿನ ಕಾಯಕ..
ಪಾರೋ ಸೌಂದರ್ಯ..
ಬಟ್ಟೆ
ತಯಾರಿಕೆ ಮತ್ತು ಪರ್ಯಾಯ ಪದ್ದತಿ:
ಮೊದಲು
ನಾವಿಬ್ಬರೂ "ಚೆಂಚೋ
ಹ್ಯಾಂಡಿಡಿಕ್ರಾಫ್ಟ್" ಎಂಬ
ಬಟ್ಟೆ ನೇಯ್ದು ಮಾರಾಟ ಮಾಡುವ
ಮಳಿಗೆಯೊಂದಕ್ಕೆ ಭೇಟಿ ನೀಡಿದ್ದೆವು.
ವಿವಿಧ ಡಿಸೈನುಗಳ
ಕೀರಾ, ಘೊ, ಮತ್ತು
ಕಾರ್ಪೆಟ್ ಗಳನ್ನು ನೇಯುವಲ್ಲಿ
ಹುಡುಗಿಯರು ಮಘ್ನರಾಗಿದ್ದರು.
ಸಾಮಾನ್ಯರಿಗೆ ಬಟ್ಟೆ
ನೇಯಲು ಸಾಮಾನ್ಯವಾಗಿ ೪ ರಿಂದ ೫
ತಿಂಗಳುಗಳು ಬೇಕಾಗುತ್ತದೆಯಂತೆ.
ಕೆಲವು ವರ್ಷಗಳ ಹಿಂದೆ
ಪಶ್ಚಿಮ ಭೂತಾನೀ ಹೆಂಗಸರು ನೇಕಾರ
ಕಾಯಕವನ್ನೂ, ಪೂರ್ವ
ಭೂತಾನೀಯರು ಬೆಳೆ ಬೆಳೆಯುವುದೂ
ಹಾಗೂ ಗುಡ್ಡಗಾಡು ಭೂತಾನೀಯರು
ಉಣ್ಣೆಯ ಬಟ್ಟೆ ಹಾಗೂ ಯಾಕ್ ಚೀಸ್
ತಯಾರಿಸುವುದೂ, ಎಲ್ಲರೂ
ತಮ್ಮಲ್ಲಿ ಹೇರಳವಾಗಿ ಸಿಗುವ
ಒಂದು ವಸ್ತುವಿಗೆ ಪರ್ಯಾಯವಾಗಿ
ಮತ್ತೊಂದನ್ನು ಕೊಟ್ಟು ಪಡೆಯುವ
ಪರ್ಯಾಯ ಪದ್ಧತಿ ಜಾರಿಯಲ್ಲಿತ್ತು.
ಇತ್ತೀಚೆಗೆ ನಾನು
ಭೇಟಿ ಮಾಡಿದಂಥಹಾ ಹಲವು ಮಳಿಗೆಗಳು
ಭೂತಾನಿನ ಕೆಲವು ಪಟ್ಟಣಗಳಲ್ಲಿ
ತಲೆಯೆತ್ತಿ ನೇಕಾರ ಹೆಂಗಸರಿಗೆ
ಕಾಯಕ ಒದಗಿಸಿ ಬಟ್ಟೆ ತಯಾರಿಕೆ
ಹಾಗೂ ಮಾರಾಟಗಳಲ್ಲಿ ತೊಡಗಿವೆ.
ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಕಾರ್ಪೆಟ್ ನೇಯುತ್ತಿರುವ ಹುಡುಗಿ
ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಬಟ್ಟೆ ನೇಯುವ ಮತ್ತೊಂದು ರೀತಿಯ ಯಂತ್ರ.. ಇದರಲ್ಲಿ ವಿವಿಧ ರೀತಿಯ ಡಿಸೈನ್ ಗಳಿರುವ ಬಟ್ಟೆ ನೇಯಲು ಸಾಧ್ಯವಿಲ್ಲ.. ಮತ್ತು ಇದರಿಂದ ತಯಾರಿಸಿದ ಬಟ್ಟೆಗಳು ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುತ್ತವೆ.
ನಂತರ
ನಾವು ಡ್ರುಗ್ಯೆಲ್ ಝಾಂಗ್ ಎಂಬ
ಜೀರ್ಣಾವಸ್ಥೆಯಲ್ಲಿರುವ ಹಳೆಯ
ಕೋಟೆಯೊಂದಕ್ಕೆ ಭೇಟಿ ನೀಡಿದ್ದೆವು.
ಝಾಂಗ್ ಒಳಹೋಗಲು
ಸುತ್ತಲೂ ಕ್ರಮಬದ್ಧ ಹಾದಿಯಿರುತ್ತದೆ.
ಮೊದಲು ಎಡಭಾಗದ ಹಾದಿಯಿಂದ
ಬಳಸಿ ಬಂದು ಕಟ್ಟಡವನ್ನು ಸುತ್ತಿ,
ಬಲ ಭಾಗದ ಹಾದಿಯಿಂದ
ಒಳಹೋಗಬೇಕು, ಇಲ್ಲವಾದರೆ
ದೇವರು ಹರಸುವುದಿಲ್ಲ ಎಂಬ ನಂಬಿಕೆ
ಇಲ್ಲಿಯ ಜನರಲ್ಲಿದೆ. ನಂತರ
ಹಳ್ಳಿಗಳತ್ತ ನಮ್ಮ ಸಂಚಾರ
ಕಾಲ್ನಡಿಗೆಯಲ್ಲಿ ಸಾಗಿತ್ತು.
ಡ್ರುಗ್ಯೆಲ್ ಝಾಂಗ್ ಎಂಬ ಜೀರ್ಣಾವಸ್ಥೆಯಲ್ಲಿರುವ ಹಳೆಯ ಕೋಟೆ
ಭೂತಾನಿನ
ಹಳ್ಳಿಮನೆಗಳ ಚಿತ್ರಣ:
ಭೂತಾನಿನಲ್ಲಿ
ಸಾಮಾನ್ಯ ಮನೆಗಳೂ ಕೂಡಾ ಭುದ್ದಿಷ್ಟ್
ಶೈಲಿಯ ವಾಸ್ತುಶಿಲ್ಪದಂತೆ
ರಚನೆಗೂಂಡಿವೆ. ಮಣ್ಣು
ಹಾಗೂ ಪೈನ್ ಮರಗಳನ್ನು ಉಪಯೋಗಿಸಿ
ಕಟ್ಟಿದ ಮನೆಗಳಲ್ಲಿ ಚಂದದ
ಕೆತ್ತನೆಗಳೂ ಹಾಗೂ ಚಿತ್ರಗಳೂ
ಸಾಮಾನ್ಯ. ಸಾಮಾನ್ಯವಾಗಿ
೨ ಅಥವಾ ೩ ಅಂತಸ್ತಿನ ಮನೆಗಳು
ಕಾಣಸಿಗುತ್ತವೆ. ಮೊದಲ
ಅಂತಸ್ತಿನಲ್ಲಿ ಜನವಸತಿಯಿದ್ದರೆ,
ಕೆಳ ಅಂತಸ್ತನ್ನು
ಧವಸ, ಧಾನ್ಯಗಳ
ಸಂರಕ್ಷಣೆಗೆ ಹಾಗೂ ಚಿಕ್ಕ
ಮೇಲಂತಸ್ತನ್ನು ಹುಲ್ಲು ಹಾಗೂ
ಇತರೆ ಜಾನುವಾರುಗಳಿರೆ ಆಹಾರ
ಸಂರಕ್ಷಣೆಗೆ ಬಳಸುತ್ತಾರೆ.
ಮನೆಯ ಪಕ್ಕ ಚಿಕ್ಕ
ಕೊಟ್ಟಿಗೆ ಜಾನುವಾರು ಮತ್ತು
ಕುದುರೆಗಳಿಗಾಗಿ ಮೀಸಲಿಟ್ಟಿದ್ದಾರೆ.
ಮೊದಲೆಲ್ಲಾ ಮನೆಯ ಕೆಳ
ಅಂತಸ್ತನ್ನೇ ಜಾನುವಾರುಗಳ
ವಸತಿಗಾಗಿ ಬಳಸುತ್ತಿದ್ದರಂತೆ.
ಕಾಲ ಬದಲಾದಂತೆ
ಭೂತಾನೆಯರಲ್ಲಿ ಆರೋಗ್ಯದ ಬಗ್ಗೆ
ಕಾಳಜಿ ಮೂಡಿದೆ. ಆದ್ದರಿಂದಲೇ
ಜಾನುವಾರುಗಳ ಸಾಕಣೆಗೆ ಕೊಟ್ಟಿಗೆಗಳು
ಮನೆಯ ಹೊರಗೆ ಕಟ್ಟಲ್ಪಟ್ಟಿವೆ.
ಪ್ರತೀ ಮನೆಗಳಲ್ಲೂ
ಸುಸಜ್ಜಿತ ದೇವರ ಕೋಣೆ ಹಾಗೂ
ಪ್ರಾರ್ಥನಾ ಚಕ್ರಗಳೂ ಸರ್ವೇ
ಸಾಮಾನ್ಯ. ದೇವರ
ಕೋಣೆಯಲ್ಲಿ ಬುದ್ಧ ಹಾಗೂ ಕೆಲವು
ಪ್ರಮುಖ ಬೌದ್ಧ ಸನ್ಯಾಸಿಗಳ
ಮೂರ್ತಿಗಳು ಇರುತ್ತವೆ. ಜೊತೆಗೆ
ದಿನಾ ಬೆಳಗ್ಗೆಯಿಂದ ಸಂಜೆಯ ವರೆಗೆ
ಹಣ್ಣುಗಳನ್ನು ಹಾಗೂ ಪುಟ್ಟ ಪುಟ್ಟ
ತಾಮ್ರದ ಬೌಲುಗಳಲ್ಲಿ ನೀರು
ತುಂಬಿಸಿ ದೇವರಿಗೆ ನೈವೇದ್ಯಕ್ಕೆಂದು
ಇಡುವ ಪದ್ದತಿಯಿದೆ. ಸಂಜೆ
ನೀರನ್ನು ಬರಿದುಮಾಡಿ ಅದೇ
ಬೌಲುಗಳಲ್ಲಿ ದೀಪ ಹಚ್ಚುತ್ತಾರೆ.
ನಾನು ಭೇಟಿ ನೀಡಿದ
ತೊಬ್ಗೆ ಎಂಬ ಹಳ್ಳಿಗನ ಮನೆಯಲ್ಲಿ
ಇದನ್ನೆಲ್ಲಾ ಆತ ನನಗೆ ಪೂರ್ತಿಯಾಗಿ
ತೋರಿಸಿ ವಿವರಿಸಿದ.
ಹೀಗೊಂದು ಸಾಮಾನ್ಯ ಮನೆ..
ಭೂತಾನಿನಲ್ಲಿ ಹೆಚ್ಚಾಗಿ ಬಾವಿಗಳನ್ನು ತೋಡುವುದಿಲ್ಲ. ನದಿಗಳಲ್ಲಿ ನೀರು ಯಾವಾಗಲೂ ಒಂದೇ ತೆರನಾಗಿ ಹರಿಯುವುದರಿಂದ ನದಿಯ ನೀರನ್ನೇ ದಿನನಿತ್ಯದ ಬಳಕೆಗಾಗಿ ಉಪಯೊಗಿಸುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಬ್ಬಿ ನೀರಿನ ಉಪಯೋಗ ಹೆಚ್ಹಾಗಿ ಕಂಡುಬರುತ್ತದೆ. ಮನೆಯ ಮುಂಭಾಗ ಸೋಂಗ್ಫು ಎಂದು ಕರೆಯಲ್ಪಡುವ ಒಲೆಗೆ ಪೈನ್ ಮರದ ಎಲೆಗಳು ಹಾಗೊ ಸಿಪ್ರೆಸ್ (ಇದು ಭೂತಾನಿನ ರಾಷ್ತ್ರೀಯ ಸಸ್ಯ) ಎಲೆಗಳನ್ನು ಒಟ್ಟಿ ಹೊಗೆಬರಿಸಿ ಸುಗಂಧವನ್ನು ಆಹ್ಲಾದಿಸುವ ಆಚರಣೆಯಿದೆ. ಇದೊಂದು ಪವಿತ್ರ ಪದ್ದತಿಯಾಗಿ ಕೂಡಾ ಭೂತಾನಿನಲ್ಲಿ ಜಾರಿಯಲ್ಲಿದೆ.
ಸೋಂಗ್ಫು ಎಂದು ಕರೆಯಲ್ಪಡುವ ಒಲೆ
ಮನೆ
ನಿರ್ಮಿಸುವುದು, ವ್ಯವಸಾಯ
ಮತ್ತು ಸಹಕಾರೀ ಪದ್ಧತಿ:
ಭೂತಾನೀಯರು ಹೆಚ್ಚಾಗಿ
ಮಣ್ಣು ಮತ್ತು ಪೈನ್ ಮರದ ಹಲಗೆಗಳನ್ನು
ಉಪಯೋಗಿಸಿ ಮನೆ ಕಟ್ಟುತ್ತಾರೆ.
ಮನೆ ನಿರ್ಮಿಸುವುದರಲ್ಲಿ
ಮತ್ತು ವ್ಯವಸಾಯ ಮಾಡುವಲ್ಲಿ
ಇವರು ಸಹಕಾರೀ ಧೊರಣೆ ಅನುಸರಿಸುತ್ತಾರೆ.
ಊರಿನ ಒಬ್ಬ ಮನೆ
ಕಟ್ಟಬೇಕಾದರೆ ಊರಿನ ಎಲ್ಲರೂ
ದುಡಿಯುತ್ತಾರೆ. ಗಂಡಸರು
ಪೈನ್ ಮರವನ್ನು ಕಡಿದು, ಒಣಗಿಸಿ,
ವಿವಿಧ ಆಕಾರಗಳಲ್ಲಿ
ಕತ್ತರಿಸಲು ನೆರವಾದರೆ, ಹೆಂಗಸರು
ಮಣ್ಣು ಕಲೆಸುವುದು, ಗೋಡೆ
ಕಟ್ಟುವುದು ಮುಂತಾದ ಕೆಲಸಗಳಲ್ಲಿ
ನೆರವಾಗುತ್ತಾರೆ. ಮರದ
ಕೆತ್ತನೆಗಳಿಗೆ ಸಲಹೆ ಕೊಡಲು
ಮಾತ್ರಾ ಕಾರ್ಪೆಂಟರ್ ಒಬ್ಬನನ್ನು
ನೇಮಿಸಿಕೊಳ್ಳುತ್ತಾರೆ.
ಕಾರ್ಪೆಂಟರನಿಗೆ ಸಂಬಳ
ಕೊಟ್ಟು ಕೆಲಸ ತೆಗೆದುಕೊಳ್ಳುತ್ತಾರೆ.
ಇಂತಿಪ್ಪ
ಒಂದು ಮನೆ ಕಟ್ಟಲು ೪ ರಿಂದ ೫
ತಿಂಗಳುಗಳು ಬೇಕಂತೆ. ವ್ಯವಸಾಯದಲ್ಲಿ ಕೂಡಾ
ಇದೇ ರೀತಿಯ ಸಹಕಾರೀ ಧೊರಣೆ
ಕಂಡುಬರುತ್ತದೆ. ಗದ್ದೆ
ನೆಟ್ಟಿಯಿಂದ ಹಿಡಿದು ಕಟಾವು
ಮಾಡುವ ವರೆಗೆ ಒಬ್ಬರಿಗೊಬ್ಬರು
ಸಹಾಯ ಮಾಡಿಕೊಳ್ಳುತ್ತಾರೆ.
ಮುಂದುವರೆಯುವುದು........
Lovely article
ಪ್ರತ್ಯುತ್ತರಅಳಿಸಿಅಯ್ಯೋ ನನ್ನ ಕಾಮೆಂಟ್ ಎಲ್ಲಿ ಹೋಯ್ತು....ಛೇ...
ಪ್ರತ್ಯುತ್ತರಅಳಿಸಿಚಾರಣ ಚಿತ್ರಣ ಚನ್ನಾಗಿ ಮೂಡಿಬಂದಿದೆ...ಕಾಂತಿ ..ಈ ಹಿಂದೆ ಏನು ಬರೆದಿದ್ದೆನೋ ನೆನಪಾಗ್ತಿಲ್ಲ... ವಿವರಣೆ ಇಷ್ಟ ಆಯ್ತು