ಮುಖ ನೋಡಿದರೆ ನೆನಪಾಗುತ್ತದೆ
ಹಿಂದಿನದೆಲ್ಲಾ!..
ಮೌನದ ಹಿಂದಿನ ನೋವು,
ಶಾಂತತೆಯ ಸೊಗಡು ಹೊದ್ದ
ಜ್ವಾಲಾಮುಖಿ...
ಅಳಲೂ ಸ್ವಾತಂತ್ರ್ಯವಿಲ್ಲದೆ
ದುಃಖದ ಕಟ್ಟೆಯೊಡೆದು
ಹೊರಬರಲು ಹವಣಿಸುವ
ಕಣ್ಣೀರು..
ತುಟಿಯಂಚಿನ ಸಣ್ಣನೆಯ
ಕಂಪನ, ಏನೋ ಹೇಳಲು
ಹವಣಿಸುವ, ಮಾತು ಬಾರದ,
ಬಂದರೂ ಹೇಳಲಾರದ,
ಅನುಭವಿಸಲಾರದ ನೋವಿನ
ದಿನಗಳು.
ಮನದ ಮೌನ ಸ್ವಗತವಾಗಿ
ಸ್ವಗತ ಮಾತಾಗಿ
ಮನದ ದ್ವಂದ್ವಗಳನ್ನು
ಇಡಿಯಾಗಿ ಬಿಚ್ಚಿಡಲು...
ಇಲ್ಲ ಆಕೆ ಮೌನದಿಂದ
ಸ್ವಗತದೆಡೆಗೆ ಮಾತ್ರ ಚಲಿಸಬಲ್ಲಳು.
ಯಾಕೆ ಹೀಗೆ? ಭೇಧಿಸಲಾರಳೇ
ಜಿಡ್ಡುಗಟ್ಟಿದ ಜನಮನದ ಕಟ್ಟುಪಾಡು??
ನನ್ನನು ನಾನೇ ಕೇಳಿಕೊಳ್ಳುತ್ತೇನೆ,
ಪ್ರಶ್ನೆಗಳ ಮೇಲೆ ಪ್ರಶ್ನೆಗಳು
ಉತ್ತರವಿಲ್ಲದ, ಉತ್ತರಿಸಲಾಗದ
ಯಾರಲ್ಲೂ ಕೇಳದ
ನನ್ನೊಳಗಿನ ಪ್ರಶ್ನೆಗಳು!!
ಎಲ್ಲ ಬರೀ ಸ್ವಗತ.....
sometimes I feel..
ಪ್ರತ್ಯುತ್ತರಅಳಿಸಿI myself is a wrong consultant..
being fucked up with and by my
own way out - layouts of life...
Nice blog.. chanda kavanagaLu.. :-)
ಪ್ರತ್ಯುತ್ತರಅಳಿಸಿThanks Sushruta..
ಪ್ರತ್ಯುತ್ತರಅಳಿಸಿನಿರಂತರವಾಗಿ ಹುಡುಕಾಡುತ್ತಿರುವ ಕೂಲಿಯೇ,
ಪ್ರತ್ಯುತ್ತರಅಳಿಸಿನೀವು ಮೌನದಿಂದ ಗೊಣಗಾಟದ ಕಡೆಗೆ ಹೋಗುವ ಕವನ ತುಂಬಾ ಹಿಡಿಸಿತು. ಬೇಡವೆಂದರೂ ಹೇಳದಿರಲಾಗದ ನಿಮ್ಮ ಮನದ ಸ್ವಗತ ಮುಂದುವರೆಯುತ್ತಿರಲಿ. ಹೀಗೆ ಭಾವನೆಗಳನ್ನು ಹರಿಯಬಿಟ್ಟರೆ, ಭೂತ ಕಾಡುವುದಿಲ್ಲ...ಭವಿಷ್ಯ ಪೀಡಿಸುವುದೂ ಇಲ್ಲ...ಆದರೆ ಬದುಕು ಹಗುರಾಗುತ್ತದೆ. ಶುಭವಾಗಲಿ
chennagiddu kanti
ಪ್ರತ್ಯುತ್ತರಅಳಿಸಿ@Dayanand & Chetu: Thanks..
ಪ್ರತ್ಯುತ್ತರಅಳಿಸಿಕಾಂತಿ...ಬಹಳ ಮಂಥಿತ ಭಾವನೆಗಳ ಪದಜೋಡಣೆ,,,ಅದರಲ್ಲೂ ಇಡೀ ಕವನಕ್ಕೆ ಸಾರಾಂಶವಾಗಿದೆ ಈ ನಿಮ್ಮ ಅಂತಿಮ ಚರಣ...
ಪ್ರತ್ಯುತ್ತರಅಳಿಸಿನನ್ನನು ನಾನೇ ಕೇಳಿಕೊಳ್ಳುತ್ತೇನೆ,
ಪ್ರಶ್ನೆಗಳ ಮೇಲೆ ಪ್ರಶ್ನೆಗಳು
ಉತ್ತರವಿಲ್ಲದ, ಉತ್ತರಿಸಲಾಗದ
ಯಾರಲ್ಲೂ ಕೇಳದ
ನನ್ನೊಳಗಿನ ಪ್ರಶ್ನೆಗಳು!!
ಎಲ್ಲ ಬರೀ ಸ್ವಗತ.....