ಶುಕ್ರವಾರ, ಏಪ್ರಿಲ್ 23, 2010

ನನ್ನೊಳಗಿನ ವಿಕಾರಗಳು

ಏನಾದರೂ ಬರೆಯಬೇಕೆಂದು ಕುಳಿತಾಗಲೆಲ್ಲಾ ಏನು ಬರೆಯಬೇಕೆಂಬ ಸಂದಿಗ್ದದಲ್ಲಿ ನಲ್ಲೆಲ್ಲ ಆಲೋಚನೆಗಳೂ ಮನಸ್ಸಿನಿಂದ ಮಾಯವಾಗಿ ಶೂನ್ಯವಾಗಿಬಿಡುತ್ತೇನೆ. ಮನುಷ್ಯನ ಮನಸ್ಸಿನ ವಿಕಾರಗಳ ಬಗೆಗೆ, ಬುದ್ದೀಮತ್ತೆಯ ಬಗೆಗೆ ಯೋಚಿಸುವಾಗಲೆಲ್ಲ ಸೃಷ್ಟಿ ನಿಯಮದ ಬಗ್ಗೆ ವಿಚಿತ್ರ ಕುತೂಹಲ ಉಂಟಾಗುತ್ತದೆ. "ಪ್ರಕೃತಿ ಬರೀ ಮನುಷ್ಯನಿಗೇಕೆ ಅತ್ಯಧಿಕ ಬುದ್ದಿಶಕ್ತಿ ನೀಡಿದೆ? ಮಿಕ್ಕೆಲ್ಲ ಜೀವಿಗಳ ಜೊತೆ ಏಕೆ ಈ ಬೇಧಭಾವ?" ಎಂಬೆಲ್ಲಾ ಚಿಂತನೆಗಳು, ಇಡಿಯಾಗಿ ಚಿಂತಿಸಿದಂತೆಲ್ಲಾ ಮನುಷ್ಯನ ಹೊರತಾಗಿ ಉಳಿದೆಲ್ಲ ಜೀವಿಗಳೂ ಪರಮ ಸುಖಿಗಳು, ಪ್ರಕೃತಿಯ ನಿಯಮದ ಜೊತೆ ಜೊತೆಗೆ ಬದುಕನ್ನು ಸಾಗಿಸುವ, ಸೂಕ್ಷ್ಮವಾಗಿ ಬದುಕುವ ಸಾಮರ್ಥ್ಯ ಮನುಷ್ಯನಿಗಿಂತ ಮಿಗಿಲಾಗಿ ಉಳಿದೆಲ್ಲ ಜೀವಿಗಳಿಗೂ ಪ್ರಕೃತಿದತ್ತವಾಗಿ ಬಂದಿದೆ. ಮನುಷ್ಯನೇಕೆ ಇಷ್ಟು ಬುದ್ದಿವಂತನಾದ? ಇಷ್ಟು ಕ್ರೂರಿಯಾದ? ಪ್ರಕೃತಿಗೆ ಸಡ್ಡು ಹೊಡೆದು ತನ್ನೆಲ್ಲಾ ಬಯಕೆಗಳ ಈಡೇರಿಕೆಗೆ ತನ್ನ ಸುತ್ತಮುತ್ತಲಿನ ಎಲ್ಲವನ್ನೂ ಬಲಿಕೊಡುತ್ತಾ ಬಂದ? ಎಂದೆಲ್ಲ ಯೋಚಿಸುವಾಗ ಮನಸ್ಸಿಗೇನೋ ಕಿರಿ ಕಿರಿ. ಇವೆಲ್ಲಾ ಚಿಂತನೆಗಳೂ ಶೂನ್ಯವಾಗಿ, ನನ್ನನ್ನು ನಾನು ಬಾಹ್ಯ ಪ್ರಪಂಚಕ್ಕೆ ತೆರೆದುಕೊಳ್ಳುವಾಗಲೆಲ್ಲ ಅಂದುಕೊಳ್ಳುತ್ತೇನೆ, ನಾವು ಮತ್ತೆಂದೂ ಹಿಂತಿರುಗಿ ನೋಡದಷ್ಟು, ನಡೆಯದಷ್ಟು ಮುಂದುವರೆದಿದ್ದೇವೆ. ನಮ್ಮ ಪೂರ್ವಿಕರಂತೆ, ಅವರ ಪೂರ್ವಿಕರಂತೆ ನಾವೆಂದೂ ಬದುಕಲು ಸಾಧ್ಯವಿಲ್ಲ. ದೈನಂದಿನ ಚಿಕ್ಕ ಪುಟ್ಟ ಅವಶ್ಯಕತೆಗಳಿಗೂ ನಾವು ಪರಾವಲಂಬಿಗಳಾಗಿದ್ದೇವೆ. ಒಂದೊಮ್ಮೆ ಜಲ ಪ್ರಳಯವಾಗಿ, ನಾಗರೀಕತೆ ಪೂರ್ತಿ ನಾಶವಾಗಿ, ಮನುಷ್ಯನ ಚಿಕ್ಕ ಸಂತತಿಯೊಂದು ದ್ವೀಪದಲ್ಲಿ ಉಳಿಯುವಂತಾಗಿ, ಹೊಸ ನಾಗರೀಕತೆಯ ಉಗಮವಾದರೆ ಮಾನವ ಪ್ರಕೃತಿದತ್ತವಾಗಿ ಬದುಕುತ್ತಾನೇನೋ!!

8 ಕಾಮೆಂಟ್‌ಗಳು:

  1. bahala chennagi moodibandide ninna lekhana.
    Adare istella yochane maduwa avashyakathe enide?
    adaru, bahala attyutamma lekhana...
    -Vinay

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಪಾನಿಪುರಿ ತಿನ್ನೋದು ಬಿಟ್ರೆ ಮನಸ್ಸಿನ ವಿಕಾರಗಳು ಬಹಳಷ್ಟು ಕಡಿಮೆ ಆಗುತ್ತೆ

    ಪ್ರತ್ಯುತ್ತರಅಳಿಸಿ
  4. ಸಾಫ್ಟ್ವೇರ್ ಕೂಲಿಗೆ ನನ್ನ ನಮಸ್ಕಾರಗಳು! ಅಂದ ಹಾಗೆ ಸ್ವಯಂ ಸ್ಪೂರ್ತಿ ಇಂದ ಇಸ್ತೊಂದೆಲ್ಲ ಬರೆದಿದ್ದಿಯ ಅಂದ್ರೆ ತುಂಬಾನೇ ಗ್ರೇಟ್ ಆಗ್ಬುಟ್ಟೆ!! ವೇ ಟು ಗೋ!!
    ಇಂತಿ , ಸಾಫ್ಟ್ವೇರ್ ಕೂಲಿಯ ಫ್ರೆಂಡ್ ಮತ್ತೊಬ್ಬ ಸಾಫ್ಟ್ವೇರ್ ಕೂಲಿ
    ವಿನಯ್ ಸಿ...

    ಪ್ರತ್ಯುತ್ತರಅಳಿಸಿ
  5. ****ನಿಸರ್ಗದ ಬಿಂದುಗಳು****

    ಎದುರು ಬದುರು ನಿಂತ
    ಆ ದೂರದ ಬೆಟ್ಟಗಳಂತೆ,
    ಅಗೋ ಅಲ್ಲಿ
    ಕೊರಕಲಿನಲ್ಲಿ ಸಂದಿಗೊಂದಿಗಳಲ್ಲಿ
    ನುಸುಳಿ ಹರಿವ ಕಿರು ತೊರೆಯಂತೆ,
    ಗಾಳಿಯೊಂದಿಗೆ ಗುಸುಗುಸು
    ಮಾತನಾಡುತ್ತಾ
    ತುಯ್ಯುವ ಮರಗಳಂತೆ,
    ಹಗುರಾಗಿ ಕಳಚಿಕೊಂಡು
    ತೇಲುತ್ತಾ ಭೂಮಿಗೆ ಬೀಳುವ
    ಆ ಎಲೆಗಳಂತೆ,
    ನಿನ್ನ ಭಾವನೆಗಳು....
    ನಿಸರ್ಗದ ಬಿಂದುಗಳು!!!!!!

    ಪ್ರತ್ಯುತ್ತರಅಳಿಸಿ